LOKAKKAGI NAM'MA MATEYA KARUNEYA SANDESA
LOKAKKAGI NAM'MA MATEYA KARUNEYA SANDESA
Share
ನೀವು ಯಾತಕ್ಕಾಗಿ ಬಂದಿರುವಿರಿ?
ಪ್ರೀತಿಯ ಮಗುವೇ...
ನಾನು ಬಂದಿರುವುದು ನಿನ್ನನ್ನು ಮುನ್ನಡೆಸಲು ನಿನ್ನ ಹೃದಯ ದೇವರಿಗೆ ಪ್ರಿಯವಾದುದೆಂದು ತಿಳಿಸುವುದಕ್ಕಾಗಿ. ನನ್ನ ಮೂಲಕ ಅದನ್ನು ಸಮರ್ಪಿಸು.
ಈ ಪುಸ್ತಕವನ್ನು ಪ್ರೀತಿ ವಿಶ್ವಾಸದಿಂದ ಓದು. ನನ್ನ ಪ್ರತಿರೂಪವಿರುವ ಪದಕ ಪವಿತ್ರವಾಗಿ ಇಟ್ಟುಕೋ. 1989 ನೇಯ ಜೂನ್ 16 ಕ್ಕೆ ನೀಡಿದ ಪಾಪಿಗಳಿಗಾಗಿ ಪ್ರಾರ್ಥಿಸು ಎಂಬ ಸಂದೇಶ ಹೃದಯದಲ್ಲಿ ಸ್ವೀಕರಿಸುವವರನ್ನು ಅವರ ಮರಣದವೇಳೆ ದೇವದೂತರರೊಂದಿಗೆ ನಾನು ಸ್ವೀಕರಿಸುವೆನು.
ನನ್ನ ಆಗಮನದ ಮೂಲಕ ದೇವರು ನಿಮಗಾಗಿ ಸಮೃದ್ಧವಾಗಿ ಸುರಿಸುವ ಅನುಗ್ರಹಗಳಿಗೆ ಯಾವಾಗಲೂ ದೇವರಿಗೆ ಕೃತಜ್ಞತೆ ಹೇಳಿ ಪ್ರಾರ್ಥಿಸಬೇಕೆಂಬುದು ನನ್ನ ಆಸೆ.
ನೀವು ಇಲ್ಲಿ ಇರುವುದಕ್ಕೆ ಅನುಮತಿ ನೀಡಿದ ಪರಿಶುದ್ಧ ಪರಿಪಾಲನೆಗೆ ಕೃತಜ್ಞತೆ ಹೇಳಿ. ನನ್ನ ಮಗುವೇ, ಈ ಲೋಕವು ಅಪಕ್ವವಾದರೂ ನನ್ನ ಪವಿತ್ರ ಹೃದಯದಲ್ಲಿ ನಿನ್ನ ಸಂಪೂರ್ಣ ಸಮರ್ಪಣೆಯ ಮೂಲಕ ದೇವರು ಎಲ್ಲವನ್ನು ಕ್ರಮೀಕರಿಸುವರು. ಫಾತಿಮಾದಲ್ಲಿ ನೀಡಿರುವಂತೆ ಇಲ್ಲಿಯೂ ಈ ಭಕ್ತಿ ಪಾಪಿಗಳ ರಕ್ಷಣೆಗೆ ಸ್ವರ್ಗದಲ್ಲಿರುವ ತಂದೆಯೂ ಬಯಸುವರು. ಆಗ ಮಾತ್ರವಲ್ಲ ಈಗಲೂ ನಾನು ಕರೆಯುವುದು ಶುಭದಂದೇಶದ ಸತ್ಯ ಇನ್ನೊಮ್ಮೆ ಬಹಿರಂಗಪಡಿಸುವುದಕ್ಕಾಗಿ ಆಗಿದೆ. ಆತಂಕವಿಲ್ಲದೆ ದೇವರೊಂದಿಗಿರುವ ನಂಬಿಕೆ ಗಟ್ಟಿಯಾಗಿ ಹಿಡಿದುಕೋ. ಈಲೋಕಕ್ಕೆ ನಿಭಾಯಿಸಲು ಸಾಧ್ಯವಾಗದ ನಿನ್ನ ಶೂನ್ಯತೆಗೆ ಆಗಮಿಸಿ ಬಂದು ನಿನ್ನನ್ನು ಅವರ ಅನುಗ್ರಹಗಳಿಂದ ತುಂಬಲಿ. ಇದು ನಿನಗೆ ಸಾಧ್ಯವಾಗಲು ನೀನು ದೇವರೊಂದಿಗೆ ಪ್ರಾರ್ಥಿಸು. ಇಲ್ಲವಾದರೆ ಶಕ್ತರಾದ ದೇವರು ನಿನ್ನ ಜೊತೆಗಿರುವಾಗಲೇ ನೀನು ವಿಶ್ವಾಸದ ಮಬ್ಬಿನಲ್ಲಿ ಜೀವಿಸಬೇಕಾಗಬಹುದು.ಈ ಸತ್ಯವನ್ನು ನಾನು ನಿನಗೆ ಬಹಿರಂಗಪಡಿಸುವೆನು . ಪರಿಶುದ್ಧತೆ ಎಲ್ಲರಿಗಾಗಿ ನೀಡಲ್ಪಟ್ಟಿದೆಯಾದರೂ ಅದನ್ನು ನೆಲೆ ನಿಲ್ಲಿಸುವ ದಾರಿಗಳಾದ ಪ್ರಾರ್ಥನೆ ಹಾಗೂ ಪ್ರಾಯಶ್ಚಿತ್ತವೂ ಸರಿಯಾದ ರೀತಿಯಲ್ಲಿ ಉಪಯೋಗಿಸುವುದು ನಿನ್ನ ಕೈಗಳಲ್ಲಿದೆ. ದೇವರಿಗೆ ಅರ್ಹವಾದ ಸ್ಥಾನ ನೀಡಿದರೆ ಅವರು ನಿನ್ನನ್ನು ನಿಶ್ಚಯವಾಗಿಯೂ ಅನುಗ್ರಹಿಸುವರು. ಅದಕ್ಕಾಗಿಯೇ ಆಗಿದೆ ಅವರು ನಿನಗೆ ಜನ್ಮ ನೀಡಿರುವುದು... ನೀನು ಬಂದಿರುವುದಕ್ಕೆ ಕೃತಜ್ಞತೆಗಳು